ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಪರಿಚಯ- ನಂಬಿದ್ರೆ ನಂಬಿ
ಶ್ರೀ ಕೃಷ್ಣನು ಒಂದು ಅದ್ರುಷ್ಟವಂತ ಕುಟುಂಬದೊಡನೆ ವಾಸಿಸುತ್ತಿರುವ ಒಂದು ದೈವಿಕ ಕಥೆ
"ಅರಿಗಳ ಉರಿಯೆ,ಈ ನಡೆಯ ಬಗೆಗಿನ ನಂಬಿಕೆಯಿಡದ ಮಂದಿ, ನನ್ನನ್ನು ಪಡೆಯದೇ,ಸಾವಿನ ಸುಳಿಯಾದ, ಬಾಳ ದಾರಿಯಲ್ಲಿ ಜಾರಿಬೀಳುತ್ತಾರೆ" ಭಗವದ್ಗೀತೆ (9:3)
ನಮ್ಮ ತಲೆಮಾರುಗಳಿಂದಲೂ ನಾವು ಸಾವಿರಾರು ಪುಣ್ಯಗ್ರಂಥಗಳನ್ನು ಓದಿಕೊಂಡೇ ಬರುತ್ತಿದ್ದೇವೆ. ಎಲ್ಲ ಗ್ರಂಥಗಳು ಸಹ ಭಗವಂತನನ್ನು ಸೇರಲಿಚ್ಛಿಸುವ ದಾರಿಗಳನ್ನೇ ತೋರಿಸುತ್ತಾ, ಅವನ ಇರುವಿಕೆಯನ್ನು ಸಂಪೂರ್ಣವಾಗಿ ಚಿತ್ರಿಸುತ್ತದೆ. ಪ್ರತಿದಿನ ಬೆಳಗ್ಗೆ ಎಲ್ಲರೂ ಸಹ ತಮ್ಮದೇ ಆದ ರೀತಿಯಲ್ಲಿ ದೇವರನ್ನು ಪೂಜಿಸುತ್ತಾರೆ.ಅದು ಸಣ್ಣರೀತಿಯಲ್ಲಾದರೂ ಸರಿ ಅಥವ ದೊಡ್ಡ ರೀತಿಯಲ್ಲಾದರೂ ಸರಿ. ಕೆಲವರು ದೀಪ ಹಚ್ಚಿ, ಇನ್ನೂ ಕೆಲವರು ಎಡೆಯನ್ನಿಟ್ಟು (ಪ್ರಸಾದವನ್ನಿಟ್ಟು), ಮತ್ತೂ ಕೆಲವರು ತಮಗಿಷ್ಟವಾದ ದೇವರಿಗೆ ಸಹಸ್ರನಾಮಾವಳಿಗಳನ್ನು ಹೇಳುತ್ತಾರೆ. ಹೀಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ರೀತಿ-ರಿವಾಜುಗಳಿರುತ್ತದೆ.
ಯಾವ ರೀತಿಯಲ್ಲಿ ಬೇಡಿಕೊಂಡರೂ ಸಹ ಕೊನೆಯಲ್ಲಿ ಎಲ್ಲರೂ ಹೇಳುವುದು............" ದೇವ್ರೇ, ನನ್ನ ಕಾಪಾಡಪ್ಪ, ಹೇಗಾದರು ಮಾಡಿ ಇವತ್ತು ನಾನು ಸಂದರ್ಶನದಲ್ಲಿ ಆಯ್ಕೆ ಆಗೋ ಹಾಗೆ ಮಾಡಪ್ಪ. ಎಲ್ಲಾ ಅಷ್ಟೈಶ್ವೈರ್ಯವೂ ನನಗೆ ಬಂದು ಸೇರೋ ಹಾಗೆ ಮಾಡಪ್ಪ. ನನಗೆ ಒಳ್ಳೆ ಬಾಳಸಂಗಾತಿನ ಕೊಡಪ್ಪ " ಹೀಗೆ......ಹಾ! ನಮ್ಮಲ್ಲಿ ವಿನಿಮಯ ಪದ್ದತಿ (ಒಂದು ಕೊಟ್ಟು ಒಂದು ತಗೋಳೋದು) ಕೂಡ ಜಾಸ್ತಿ, ನೀನು ನನಗೆ ಈ ವರ ಕೊಟ್ರೆ ನಾನು ನಿನಗೆ ಈ ವ್ರತ ಮಾಡ್ತೀನಿ ಅಂತ......ಸರಿ, ಹಾಗಾದ್ರೆ ಬರೀ ಪ್ರಾಪಂಚಿಕ ವಸ್ತುಗಳನ್ನಷ್ಟೇ ನಾವು ಕೇಳೋದಾ? ಎಷ್ಟು ಸಲಿ ನಾವು, " ದೇವ್ರೇ, ಹೇಗೋ ಇಷ್ಟು ಕಾಲಗಳ ಕಾಲ ನನ್ನ ಹಾಗು ನನ್ನ ಕುಟುಂಬವನ್ನ ಸಲಹಿದ್ದಕ್ಕೆ ನಾನು ಕೃತಜ್ಞ. ನನ್ನ ಜೀವನದ ಬಗ್ಗೆ ನನಗೆ ತೃಪ್ತಿ ಇದೆ. ಇನ್ನು ನಿನನ್ನು ಸ್ಮರಿಸಲು ಮಾತ್ರ ಶಕ್ತಿಯನ್ನು ಕೊಡು" ಎಂದು ಬೇಡಿದ್ದೀವಾ? ಹೇಳಿ .......
ಈ ಪ್ರಶ್ನೆಯನ್ನು ಸ್ವಲ್ಪ ಮನಸ್ಸಿಗೆ ತಗೊಳ್ಳಿ. ನಿಜವಾಗಲು ನಾವ್ಯಾರೂ ಸಹ ನಮ್ಮ ಇಡೀ ಜೀವನದಲ್ಲಿ ದೇವರಿಗೆ ಕೃತಜ್ಞತೆ ತಿಳಿಸಿರುವುದಿಲ್ಲ. ಆದರೂ ಸಹ ದೇವರು ನಮ್ಮ ಪ್ರಾರ್ಥನೆಯನ್ನು ಆಲಿಸಿ, ನಮ್ಮ ಇಚ್ಛೆಗಳನ್ನು ಪೂರೈಸಲೇಬೇಕು ಅನ್ನೋ ಹಟ ನಮ್ಮದು…..ಆದರೆ ನಮ್ಮ ಕೆಲಸವನ್ನು ನಾವು ಸಾರಿಯಾಗಿ ಮಾಡುತ್ತಿದ್ದೀವ ?

ನಮಗೆಲ್ಲ ದೇವರು ಆಶೀರ್ವದಿಸಲೇಬೇಕು ಎಂದು ಬಯಸುತ್ತೀವಿ, ಆದರೆ,ಪ್ರಾಪಂಚಿಕ ವಸ್ತುಗಳನ್ನೇನ ನಾವು ನಿಜವಾಗ್ಲು ಬಯಸ್ತಿರೋದು? ಅಥವ ಬೇರೆ ಏನಾದ್ರು ಬಯಸ್ತಿದೀವ? ನಮ್ಮ ತೊಂದರೆಗಳನ್ನು ಅವನ ಹತ್ತಿರ ಇಟ್ಟು ಅವನಲ್ಲಿಗೆ ಯಾಕೆ ಮೊರೆ ಹೋಗ್ತೀವಿ? ಅವುಗಳು ನಮ್ಮ ಸಮಸ್ಯೆಗಳೇ ತಾನೇ ? ಈ ಸಮಸ್ಯೆಗಳನ್ನು ನಮ್ಮ ಭಕ್ತಿಯನ್ನು ಪರೀಕ್ಷಿಸಲಿಕ್ಕಾಗಿಯೇ ನೀಡಿರಬಹುದು ಎಂದು ಯಾಕೆ ಅನ್ಕೋಬಾರದು ? ನಮಗೆ ಅವನ ಪರೀಕ್ಷೆಗಳನ್ನ ತಗೋಳಕ್ಕೆ ಆಗುತ್ತಾ ?
ಸಾಮಾನ್ಯವಾಗಿ "ಸಂಕಟ ಬಂದಾಗ ವೆಂಕಟ ರಮಣ " ಅಂತ ಕಷ್ಟ ಬಂದಾಗ ಮಾತ್ರ ಅವನನ್ನ ನೆನಸಿಕೊಳ್ತೀವಿ. ಆದರೆ ನಿಜವಾದ ಭಕ್ತನಿಗೆ ಅದು ಬೇರೆಯೇ. ಮಹಾನ್ ಭಕ್ತರಾದ ಸುರ್ದಾಸ್ , ಅಣ್ಣಮಾಚಾರ್ಯ, ಸೇನಾನಾಯಿ, ಪೊನ್ನತ್ತನಮ್, ಕುರೂರಮ್ಮ ಹೀಗೆ ಇವರೆಲ್ಲರು ತಮ್ಮನ್ನು ತಾವು ಸಂಪೂರ್ಣವಾಗಿ ದೇವರಲ್ಲಿ ಬಂಧಿಸಿರುತ್ತಾರೆ. ತಮ್ಮ ಬದುಕಲ್ಲಿ ಏನಾದರೂ ಸಹ ಅವನ ಇಚ್ಛೆ ಎಂದು ಕೊಂಡಿರುತ್ತಾರೆ. ಅವರ ಬದುಕು ಸಂಪೂರ್ಣವಾಗಿ ಅವನಲ್ಲಿ , ಅವನಿಗಾಗಿಯೇ ಇರುತ್ತದೆ. ಶ್ರೀ ಕೃಷ್ಣನು ಅವರ ಮನೆಯಲ್ಲಿ ಆಟವಾಡುತ್ತಿದ್ದ ಎನ್ನಲಾಗಿದೆ.
ಆದರೇ ಇವೆಲ್ಲಾ ಈ ಕಲಿಯುಗದಲ್ಲಿ ಸಾಧ್ಯವೇ ? ಕೃಷ್ಣನು ತನ್ನ ಇರುವಿಕೆಯನ್ನು ತೋರಿಸಲೆಂದೇ ಯಾರ ಮನೆಯನ್ನಾದರೂ ಆಯ್ಕೆ ಮಾಡಿಕೊಂಡಿರುವನೇ ?
ಕೆಲವೊಮ್ಮೆ ನಾವು ಓದಿರುತ್ತೇವೆ , ಕೇಳಿರುತ್ತೇವೆ ಅಥವಾ "ಆಶ್ಚರ್ಯ ಸುದ್ದಿ" ಎಂದು ದೇವರ ಪವಾಡಗಳನ್ನು ವಾಹಿನಿಗಳಲ್ಲಿ ಚಿತ್ರಿಸುತ್ತಲೇ ಇರುತ್ತಾರೆ. ಉದಾಹರಣೆಗೆ ಜೇನು ಅಥವ ವಿಭೂತಿ ದೇವರ ಮೂರ್ತಿಯಿಂದ ಚಿಮ್ಮುವುದು, ಕನಸಿನಲ್ಲಿ ದೇವರು ಬಂದು ಯಾವುದೋ ಕೆಲಸವನ್ನು ಮಾಡುವಂತೆ ಆಜ್ಞೆ ಮಾಡುವುದು. ಹೀಗೆ, ಇವುಗಳನ್ನು ನಂಬುವುದು ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದು.
ಬಹುಷಃ ದೇವರು ನಿಮ್ಮ ಮನೆಯನ್ನು ಅವನು ವಾಸಿಸಲಿಕ್ಕಾಗಿ ಆಯ್ಕೆ ಮಾಡಿದರೇ? ಹೇಗಿರಬಹುದು ನಿಮ್ಮ ವರ್ತನೆ? ನಾವು ಅಷ್ಟೊಂದು ಅದ್ರುಷ್ಟವಂತರಾ ?
ಆದರೇ ನಂಬಿ, ನಿಜವಾಗಿಯು ಶ್ರೀ ಕೃಷ್ಣನು ಒಂದು ಕುಟುಂಬದಲ್ಲಿ ಇರಲು ಇಚ್ಛಿಸಿದ್ದಾನೆ.....ನಂಬ್ತೀರಾ?

ಸಮಯ ಬಂದಾಗ ದೇವರು ತಾನೇ ದಾರಿ ತೋರಿಸುತ್ತಾನೆ, ನಾವೇನಾದರು ಆ ದಾರಿಯಲ್ಲಿರುವ ಚುಕ್ಕಿಗಳನ್ನು ಬೆಸೆದರೆ ಸಾಕು, ನಮ್ಮ ಜೀವನವೆಂಬ ದಾರಿ ಸುಗಮವಾಗಿರುತ್ತದೆ.
ಸರಿ , ನಾನು ತುಂಬ ಅದ್ರುಷ್ಟವಂತ. ಶ್ರೀ ಕೃಷ್ಣನು ಇರುವ ಕುಟುಂಬವೊಂದು ನನಗೆ ತಿಳಿದಿದೆ. ನಾನು ಆ ಕುಟುಂಬವನ್ನು "ಕೃಷ್ಣನ ಕುಟುಂಬ" ಎಂದೇ ಕರೆಯುತ್ತೀನಿ.
ಮೊದಲು ನಾನು ಇದರ ಬಗ್ಗೆ ನನ್ನ ಕುಟುಂಬದೊಡನೆ ಚರ್ಚಿಸಿದಾಗ, ಎಲ್ಲರೂ ನನ್ನನ್ನು ಅನುಮಾನಿಸಿದರು. ನನ್ನನ್ನು ಮರುಳ ಎಂದುಕೊಂಡರು. ಆದರೆ ನನ್ನ ಬಲವಾದ ನಂಬಿಕೆ ನನ್ನನ್ನು ಮತ್ತಷ್ಟು ಬಲಿಷ್ಠಮಾಡಿತು. ನನ್ನನ್ನು ಯಾವುದೋ ಒಂದು ಶಕ್ತಿ ಸಂಪೂರ್ಣವಾಗಿ ಕಾಯುತ್ತಿದೆ ಎಂದು ನಾನು ಬಲವಾಗಿ ನಂಬಿದ್ದೇನೆ.
ಆದರೇ, ಕೃಷ್ಣ ಯಾಕೆ ನಿರ್ದಿಷ್ಟವಾದ ಭಕ್ತನನ್ನು ಆಯ್ಕೆ ಮಾಡಿಕೊಂಡ?
ಆ ಭಕ್ತನು ಬಹಳ ಧಾರ್ಮಿಕನೇ ?
ಯಾವ್ಯಾವ ಗುಣಗಳಿರಬೇಕು ಅವನಿಗೆ ?
ಸಂಸಾರದ ಜಂಜಾಟವನ್ನು ಹೊಂದದೇ ಬ್ರಹ್ಮಚಾರಿ ಅಥವ ಬ್ರಹ್ಮಚಾರಿಣಿ ಆಗಿರಬೇಕೆ ?
ಅಂದಹಾಗೆ ನಿಜವಾಗಿಯೂ ಆಶೀರ್ವಾದ ಎಂದರೇನು?
ಅದು ಹೇಗಿರುತ್ತದೆ?
ಆಶೀರ್ವಾದ ಸಿಕ್ಕಿದೊಡನೆ ಎಲ್ಲಾ "ಬೆಣ್ಣೆಯಲ್ಲಿ ಕೂದಲು " ತೆಗೆದಂತೆ ಸುಗಮವಾಗುತ್ತದೆಯೇ?
ಹೀಗೆ ಬಹಳಷ್ಟು ಪ್ರಶ್ನೆಗಳ ಮಧ್ಯೆ, ಮತ್ತೊಂದು "ಕೃಷ್ಣನ ಇರುವಿಕೆ ಆ ಕುಟುಂಬಕ್ಕೆ ಹೇಗೆ ಅರ್ಥವಾಯಿತು ?"
ಒಂದು ಸಣ್ಣ ಬೆಣ್ಣೆಯ ಉಂಡೆ ಮೇಲಿಂದ ಉದುರುವುದು,....ನೆಲದ ಮೇಲೆ ಸಣ್ಣ ಸಣ್ಣ ಹೆಜ್ಜೆಗಳು ಕಾಣುವುದು...... ಸಣ್ಣ ಮಗುವೊಂದು ಬಿಳಿಯ ಹಲಗೆಯ ಮೇಲೆ ಚಿತ್ರ ಬರೆದಂತೆ ಕಾಣುವುದು...... ನವಿಲುಗರಿಯು ಕೃಷ್ಣನ ಮೂರ್ತಿಯ ಮುಂದೆ ನಿಗೂಢವಾಗಿ ಗೋಚರಿಸುವುದು ..... ದೂಪದ ಧೂಳಿನಿಂದ ಕೈ ಅಚ್ಚು ಹಾಗು ನಗುಮುಖದ ಚಿತ್ರಗಳು ಗೋಡೆಯ ಮೇಲೆ ಬರೆದಂತೆ ಕಾಣುವುದು. ಹೀಗೆ,.....

ಹೀಗೆ, ಈ ರೀತಿಯ ನಿಗೂಢತೆಗಳನ್ನು ಈ ಕುಟುಂಬ ಅನುಭವಿಸಿದೆ ಎಂದರೆ ನಿಮ್ಮ ವರ್ತನೆ ಹೇಗಿರಬಹುದು?
ನಂಗೊತ್ತು,"ನಿಮ್ಮಲ್ಲಿ ಸಾಕ್ಷಿ ಇದೆಯಾ ? ಅಥವಾ ಈ ಚಿತ್ರಗಳನ್ನು ಈಗಿನ ತಂತ್ರಜ್ಞಾನದ ಮುಖಾಂತರ ತಿದ್ದಿದ್ದೀರೋ ?" ಹೀಗೆ ಪ್ರಶ್ನೆಗಳು ಮೂಡಬಹುದು, ಅದನ್ನೆಲ್ಲ ಬದಿಗಿಡೋಣ....ನಾನೇ ನಿಮ್ಮನ್ನ ಒಂದು ಪ್ರಶ್ನೆ ಕೇಳ್ತೀನಿ...."ಕೃಷ್ಣ ನಮ್ಮಂಥ ಭಕ್ತರೊಡನೆ ಇರಲು ಇಚ್ಛಿಸುತ್ತಾನೆ ಎಂದರೆ ನೀವು ನಂಬುತ್ತೀರೋ ?"
ಇಲ್ಲ .....ಅಲ್ಲ್ವಾ ???
ಆದರೆ ಈ ಪವಾಡಗಳು ಅಥವ ಲೀಲೆಗಳು ನಡೆದಿವೆ ಹಾಗು ಈಗಲೂ ನಡೆಯುತ್ತಿವೆ. ಅಂದಹಾಗೆ, ಆ ಭಕ್ತನು ಯಾರು ? ಅವನ ಕುಟುಂಬವು ಯಾವುದು ?
ಆ ಭಕ್ತನ ಹೆಸರೇ ........

ಕಲ್ಪನಾ ಸುರೇಶ್
ನಂಬಿ ಶ್ರೀ ಕೃಷ್ಣನು ಅವರೊಂದಿಗೆ ನಾಲ್ಕುವರೆ ವರ್ಷಗಳಿಂದ ವಾಸಿಸುತ್ತಿದ್ದಾನೆ.
ಹೇಗೆ ? ಯಾವಾಗ ? ಯಾಕೆ ???? ಬರುವ ವಾರ ತಿಳಿಸುವೆ ಅಲ್ಲಿಯವರೆಗೆ .......ಆರಾಮಾಗಿರಿ..... ಹರೇ ಕೃಷ್ಣ